1
1
ವ್ಯೂಸ್ ಗಾಗಿ GRWM ಟ್ರೆಂಡ್: ಬುದ್ಧಿವಂತರ ಊರಿನ ಮಕ್ಕಳಿಗೆ ಇದು ಸರಿಯಾದ ದಾರಿಯೇ?
ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ‘Get Ready With Me (GRWM)’ ಎಂಬ ವಿಡಿಯೋ ಟ್ರೆಂಡ್ ಭಾರೀ ಜನಪ್ರಿಯತೆ ಗಳಿಸಿದೆ. ಕಾಲೇಜಿಗೆ ಹೋಗುವ ಮೊದಲು, ಪಾರ್ಟಿಗೆ ತಯಾರಾಗುವಾಗ, ಅಥವಾ ದಿನನಿತ್ಯದ ಕೆಲಸಗಳಿಗೆ ಹೊರಡುವ ಮುನ್ನ ತಮ್ಮ ತಯಾರಿ ಪ್ರಕ್ರಿಯೆಯನ್ನು ಕ್ಯಾಮೆರಾದ ಮುಂದೆ ಪ್ರದರ್ಶಿಸುವುದು ಈ ಟ್ರೆಂಡ್‌ನ ಮುಖ್ಯ ಲಕ್ಷಣ. ಆದರೆ ಈ ಟ್ರೆಂಡ್‌ನ ಹಿಂದೆ ಅಡಗಿರುವ ಕೆಲವು ನಕಾರಾತ್ಮಕ ಅಂಶಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಒಂದು ಕಾಲದಲ್ಲಿ ಕರಾವಳಿಯ ಮಕ್ಕಳೆಂದು ಹೇಳಿದರೆ ಕಲೆ, ಸಂಸ್ಕೃತಿ, ಶಿಸ್ತು, ಬುದ್ಧಿವಂತಿಕೆ ಎಂಬ ಪದಗಳೇ ನೆನಪಿಗೆ ಬರುತ್ತಿದ್ದವು. ವಿಶೇಷವಾಗಿ ಕುಂದಾಪುರದ ಹೆಸರು ಬಂದರೆ, ನಮ್ಮದೇ ಆದ ಶೈಲಿ, ನಮ್ಮದೇ ಆದ ಮೌಲ್ಯಗಳು ಇರುವ ಜೀವನಶೈಲಿ ಎಂಬ ಹೆಮ್ಮೆ ಇತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ, ಅದೇ ಊರಿನ ಕೆಲವರು ಇನ್‌ಸ್ಟಾಗ್ರಾಂನಲ್ಲಿ “ವ್ಯೂಸ್” ಮತ್ತು “ಲೈಕ್ಸ್”ಗಾಗಿ GRWM (Get Ready With Me) ಎಂಬ ಟ್ರೆಂಡ್‌ಗಳನ್ನು ಅನುಸರಿಸುತ್ತಿರುವುದು ಗಮನಾರ್ಹ.
ಪ್ರತಿ ವ್ಯಕ್ತಿಗೂ ತನ್ನದೇ ಆದ ಅಭಿವ್ಯಕ್ತಿ ಮತ್ತು ಜೀವನಶೈಲಿ ಇರುತ್ತದೆ ಇದು ಅವರ ವೈಯಕ್ತಿಕ ವಿಷಯ. ಆದರೆ ಕುಂದಾಪುರದ ಹೆಸರನ್ನು ಬಳಸಿ ಈ ರೀತಿಯ ವಿಡಿಯೋಗಳನ್ನು ಮಾಡುವುದು, ಊರಿನ ಗೌರವಕ್ಕೆ ತಕ್ಕದ್ದಲ್ಲ ಎಂಬುದು ಹಲವರ ಅಭಿಪ್ರಾಯ. ಒಂದು ಊರಿನ ಹೆಸರು ಕೇವಲ ಒಂದು ಸ್ಥಳದ ಗುರುತು ಮಾತ್ರವಲ್ಲ; ಅದು ಅದರ ಇತಿಹಾಸ, ಸಂಸ್ಕೃತಿ ಮತ್ತು ಜನರ ಮೌಲ್ಯಗಳ ಪ್ರತಿಬಿಂಬವೂ ಆಗಿದೆ.
ಕುಂದಾಪುರದಲ್ಲಿ ಕಂಟೆಂಟ್ ಮಾಡಲು ವಿಷಯಗಳ ಕೊರತೆಯೇ ಇಲ್ಲ. ನಮ್ಮ ಆಚರಣೆಗಳು, ಹಬ್ಬಗಳು, ಭಾಷೆ, ಆಹಾರ ಪದ್ಧತಿ, ಯಕ್ಷಗಾನ, ಭಜನೆ, ಜನಪದ ಕಲೆಗಳು ಇವುಗಳ ಬಗ್ಗೆ ಮಾಡಿದರೆ ಇಡೀ ಜನ್ಮಕ್ಕೆ ಸಾಲುವಷ್ಟು ವಿಷಯಗಳಿವೆ. ನಮ್ಮ ಊರಿನ ಸೊಬಗು, ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವುದು ಕೂಡ ಒಂದು ಹೆಮ್ಮೆಯ ಕೆಲಸವೇ ಆಗಬಹುದು. ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳುವ ವೇದಿಕೆಯೂ ಆಗಬೇಕು.
ಇವರಲ್ಲಿ ಪ್ರತಿಭೆ ಇದೆ, ಆತ್ಮವಿಶ್ವಾಸ ಇದೆ, ತಂತ್ರಜ್ಞಾನ ಬಳಸುವ ಸಾಮರ್ಥ್ಯ ಇದೆ. ಅದನ್ನು ಕೇವಲ ಟ್ರೆಂಡ್‌ಗಳನ್ನು ಅನುಸರಿಸಲು ಮಾತ್ರವಲ್ಲ, ನಮ್ಮ ಗುರುತನ್ನು ಉಳಿಸಲು ಬಳಸಿದರೆ ಕುಂದಾಪುರದ ಹೆಸರು ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಮೆರೆಯುತ್ತದೆ. ವ್ಯೂಸ್‌ಗಾಗಿ ಅಲ್ಲ, ಮೌಲ್ಯಗಳಿಗಾಗಿ ಕಂಟೆಂಟ್ ಮಾಡೋಣ ಎಂಬ ಸಂದೇಶವೇ ಈ ಚರ್ಚೆಯ ಸಾರ.
ನಮ್ಮ ಸಂಸ್ಕೃತಿ ಟ್ರೆಂಡ್ ಆಗಲಿ, ನಮ್ಮ ಸಂಸ್ಕೃತಿ ಉಳಿಯಲಿ, ನಮ್ಮ ಸಂಸ್ಕೃತಿ ಬೆಳೆಯಲಿ ಅದೇ ನಿಜವಾದ ಹೆಮ್ಮೆ ಅದುವೆ ನಾವು ನಮ್ಮ ಊರಿಗೆ ಕೊಡುವ ನಿಜವಾದ ಗೌರವ.
ವಿ ಸೂ: ಇದು ಯಾರಿಗೂ ವಯಕ್ತಿಕವಾಗಿ ಅನ್ವಹಿಸುವುದಿಲ್ಲ ಹಾಗು ಇದು ನಮ್ಮ ವಯಕ್ತಿಕ ಅಭಿಪ್ರಾಯ
Absolutely right
Absolute difference between educated and literate people. Maklig education ith adre literacy ella aste