ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
October 13, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
⌕
☰ ಮೆನು
Live
KT.Media ← ಮುಖಪುಟ
ಮುಖಪುಟ› ಸುದ್ದಿ

ಮಂಗಳೂರು ವಿಮಾನ ನಿಲ್ದಾಣದಿಂದ ಹಾರಲಿವೆ ಇನ್ನಷ್ಟು ವಿಮಾನ.ದೇಶೀಯ ಹಾಗೂ ವಿದೇಶಕ್ಕೆ ಹೆಚ್ಚಲಿದೆ ವಿಮಾನ ಹಾರಾಟ..!

B
Babu
Feb 21, 2026 · 1 ನಿಮಿಷ

ಸಂಗ್ರಹ ಚಿತ್ರ · KT Media

Spread the love

ಮಂಗಳೂರು: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಮಾರ್ಚ್ ತಿಂಗಳಿನಿಂದ ಮಂಗಳೂರು ಮೂಲಕ ದೇಶೀಯ ಹಾಗೂ ವಿದೇಶಿ ವಿಮಾನ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲು ಏರ್‌ಲೈನ್ಸ್ ಸಂಸ್ಥೆಗಳು ಮುಂದಾಗಿವೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಮಂಗಳೂರು-ಮಸ್ಕತ್ ನಡುವಿನ ವಿಮಾನ ಸೇವೆಯನ್ನು ಮಾರ್ಚ್ 1ರಿಂದ ಮತ್ತೆ ಆರಂಭಿಸಲಿದೆ. ಈ ಮಾರ್ಗದಲ್ಲಿ ವಾರಕ್ಕೆ ಎರಡು ಬಾರಿ ವಿಮಾನ ಹಾರಾಟ ಇರಲಿದೆ. ಇನ್ನು ಇಂಡಿಗೋ ಸಂಸ್ಥೆಯೂ ಮಂಗಳೂರು-ಅಬುಧಾಬಿ ನಡುವಿನ ದಿನನಿತ್ಯದ ವಿಮಾನ ಸೇವೆಯನ್ನು ಮಾರ್ಚ್ ತಿಂಗಳಿಂದ ಪುನರಾರಂಭಿಸುವುದಾಗಿ ತಿಳಿಸಿದೆ.

ಮಂಗಳೂರು-ದಮ್ಮಾಮ್ ಮಾರ್ಗದ ಸೇವೆಯನ್ನು ಮಾರ್ಚ್ ತಿಂಗಳಲ್ಲಿ ವಾರಕ್ಕೆ ಆರು ಬಾರಿಗೆ ಹೆಚ್ಚಿಸಲಾಗುತ್ತಿದ್ದು, ಏಪ್ರಿಲ್‌ನಿಂದ ಪ್ರತಿದಿನವೂ ವಿಮಾನ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇದೇ ವೇಳೆ ಬಹ್ರೇನ್-ಮಂಗಳೂರು ಮಾರ್ಗದಲ್ಲಿ ಮಾರ್ಚ್ ಮೊದಲ ಎರಡು ವಾರಗಳ ಅವಧಿಗೆ ತಾತ್ಕಾಲಿಕವಾಗಿ ವಾರಕ್ಕೆ ನಾಲ್ಕು ವಿಮಾನ ಸೇವೆಗಳನ್ನು ಒದಗಿಸಲಾಗುತ್ತಿದೆ.

ದೇಶೀಯ ಮಾರ್ಗಗಳಲ್ಲಿಯೂ ಬದಲಾವಣೆ ಕಂಡುಬರುತ್ತಿದ್ದು ಮಂಗಳೂರು-ಬೆಂಗಳೂರು ನಡುವಿನ ಮಾರ್ಗದಲ್ಲಿ ಮಾರ್ಚ್ 13 ರಿಂದ 26 ರವರೆಗೆ ಮೂರನೇ ದಿನನಿತ್ಯದ ವಿಮಾನ ಸೇವೆ ಆರಂಭವಾಗಲಿದೆ. ಇದರಿಂದ ಕೆಲಸ, ಶಿಕ್ಷಣ ಹಾಗೂ ವ್ಯಾಪಾರ ಉದ್ದೇಶಕ್ಕಾಗಿ ಸಂಚರಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ.

ಇದಲ್ಲದೆ, ಇಂಡಿಗೋ ಸಂಸ್ಥೆಯು ಮಂಗಳೂರಿನಿಂದ ದಮ್ಮಾಮ್, ಜೆದ್ದಾ, ಕೊಚ್ಚಿನ್ ಹಾಗೂ ಕೊಲ್ಕತ್ತಾ ಕಡೆ ಹೊಸ ವಿಮಾನ ಮಾರ್ಗಗಳನ್ನು ಆರಂಭಿಸುವ ಕುರಿತು ಅಧ್ಯಯನ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ, ಮಂಗಳೂರು ವಿಮಾನ ನಿಲ್ದಾಣದಿಂದ ಹೆಚ್ಚುತ್ತಿರುವ ವಿಮಾನ ಸೇವೆಗಳು ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಹೆಚ್ಚು ಲಾಭವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

9 responses to “ಮಂಗಳೂರು ವಿಮಾನ ನಿಲ್ದಾಣದಿಂದ ಹಾರಲಿವೆ ಇನ್ನಷ್ಟು ವಿಮಾನ.ದೇಶೀಯ ಹಾಗೂ ವಿದೇಶಕ್ಕೆ ಹೆಚ್ಚಲಿದೆ ವಿಮಾನ ಹಾರಾಟ..!”

  1. I’ve tried a few sites lately but this one is definitely the smoothest. The login process is super quick and I didn’t hit any lags. Highly recommend kk44login for anyone looking for a reliable spot.

Leave a Reply

Your email address will not be published. Required fields are marked *