ಸೊ ಕಾಲ್ಡ್ ವ್ಲಾಗರ್ಸ್ ಗಳ ಸೊ ಕಾಲ್ಡ್ ವಾಟ್ಸಾಪ್ ಗ್ರೂಪ್

ಸಂಗ್ರಹ ಚಿತ್ರ · KT Media
ವಿಸೂ: ನಿಮ್ಮಲ್ಲಿ ನಮ್ಮವರೂ ಇದ್ದಾರೆ..!
ಕುಂದಾಪುರದಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಸುತ್ತ ಒಂದು ಚರ್ಚೆ ಜೋರಾಗಿದೆ. ಸ್ಥಳೀಯವಾಗಿ ಪ್ರಸಿದ್ಧರಾಗಿರುವ ಕೆಲವು ಸು ಕಾಲ್ಡ್ ವ್ಲಾಗರ್‌ಗಳು ಮತ್ತು ಕೆಲವು ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿರುವುದು ಮಾತ್ರವಲ್ಲ, ಅವರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಕೂಡ ಕೇಳಲಾಗುತ್ತಿದೆ. ಆದರೆ ಈ ಕಥೆಗೆ ಟ್ವಿಸ್ಟ್ ಏನೆಂದರೆ ಇದು ಸಾಮಾನ್ಯ ಸೋಷಿಯಲ್ ಮೀಡಿಯಾ ಡ್ರಾಮಾ ಅಲ್ಲ, ಇದು “ವಾಟ್ಸಾಪ್ ಸ್ಟ್ರಾಟಜಿ ಮೀಟಿಂಗ್” ಮಟ್ಟಕ್ಕೆ ಹೋಗಿದೆ.
ಪಾಸಿಟಿವ್ ಕಾಮೆಂಟ್‌ಗಳ “ಸಂಘಟಿತ” ಆಟ?
ಕೆಲವು ವ್ಲಾಗರ್‌ಗಳ ಪೋಸ್ಟ್‌ಗಳ ಕೆಳಗೆ ಬೇರೆ ವ್ಲಾಗರ್ಸ್ ಗಳಿಂದ ಅತಿಯಾಗಿ ಹೊಗಳುವ ಕಾಮೆಂಟ್‌ಗಳು ಸಾಲಾಗಿ ಕಾಣಿಸುತ್ತಿರುವುದು ಹಲವರ ಅನುಮಾನಕ್ಕೆ ಕಾರಣವಾಗಿತ್ತು. ಇಲ್ಲಿ ಬಹುತೇಕ ಕಾಮೆಂಟ್‌ಗಳು ಅದೇ ಊರಿನ ಬೇರೆ ಬೇರೆ ವ್ಲಾಗರ್ಸ್ ಅಕೌಂಟ್ಸ್ ಗಳಿಂದ ಅತಿಯಾದ ಹೊಗಳಿಕೆಯ ಪಾಸಿಟಿವ್ ಕಾಮೆಂಟ್ಸ್ ಮಾಡಲಾಗುತ್ತಿದೆ ಮತ್ತು ಅವುಗಳ ಭಾಷೆ, ಶೈಲಿ ಕೂಡ ಒಂದೇ ರೀತಿಯಾಗಿರುವುದು, ಇದು ಸಂಯೋಜಿತ ಪ್ರಯತ್ನವಿರಬಹುದೇ.!? ಎಂಬ ಪ್ರಶ್ನೆಮೂಡಿಸಿತ್ತು. ಈ ಪ್ರಶ್ನೆಗೆ ಇಂದು ಬ್ರೇಕ್ ಬಿದ್ದಿದೆ.
ವ್ಲಾಗರ್ಸ್ ಗಳು ಸಂಘಟಿತವಾಗಿ ಒಂದು ವಾಟ್ಸಾಪ್ ಗ್ರೂಪ್ ಮಾಡಿ ಕೊಂಡು ಅಲ್ಲಿ ಹೇಗೆ ಈ ಫಜೀತಿಯಿಂದ ಹೊರಬರುವುದೆಂದು ಚರ್ಚೆಯನ್ನು ಮಾಡುತ್ತಾ ಇದ್ದಾರೆ ಎಂದು ಅದೇ ಗ್ರೂಪಿನಲ್ಲಿ ಇರುವ ಒಬ್ಬ ವ್ಯಕ್ತಿಯು ಇದರ ಒಳಗುಟ್ಟನ್ನು ಬಿಚ್ಚಿಟ್ಟಿದ್ದಾನೆ.
ನೆಗೆಟಿವ್ ಕಾಮೆಂಟ್‌ಗಳಿಗೆ “ಬ್ಲಾಕ್ & ಡಿಲೀಟ್” ನೀತಿ.
ಯಾರಾದರೂ ಟೀಕಾತ್ಮಕ ಅಥವಾ ನೆಗೆಟಿವ್ ಕಾಮೆಂಟ್ ಮಾಡಿದರೆ ಅದನ್ನು ತಕ್ಷಣ ಡಿಲೀಟ್ ಮಾಡುವುದು ಹಾಗೂ ಕಾಮೆಂಟ್ ಮಾಡಿದವರನ್ನು ಬ್ಲಾಕ್ ಮಾಡುವ ಕ್ರಮ ಅನುಸರಿಸಲಾಗುತ್ತಿದೆ. ಇಷ್ಟು ಅಸಮಾಧಾನದ ನಡುವೆಯೂ, ಕೆಲವು ವ್ಲಾಗರ್‌ಗಳು [ಹೆಸರಿಗಷ್ಟೇ] ತಮ್ಮ ನಡೆ ಕುರಿತು ಯಾವುದೇ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬದಲಾಗಿ, ಅವರು ತಮ್ಮ ಕ್ರಮಗಳನ್ನು ಸಮರ್ಥಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ ವ್ಯಕ್ತಿಗಳಿಂದ ಪಾರದರ್ಶಕತೆ ಮತ್ತು ಜವಾಬ್ದಾರಿತನ ನಿರೀಕ್ಷಿಸಲಾಗುತ್ತದೆ. ತಪ್ಪುಗಳಿದ್ದರೆ ಅವನ್ನು ಒಪ್ಪಿಕೊಳ್ಳುವುದು ಹಾಗೂ ಸರಿಪಡಿಸುವ ಮನೋಭಾವ ಅಳವಡಿಸಿಕೊಳ್ಳಿ.
Safe, secure, and very efficient. I have had zero issues with my deposits and withdrawals here. puasbetlogin is the real deal.
Great customer support and very easy registration process. I managed to get my first win within an hour of joining vnau8802. Really happy with the service.
Really honest platform with fair odds. I appreciate how transparent everything is here. Good luck to everyone playing! pk365lucky