ಮಂಗಳೂರು-ರಿಯಾದ್ ನೇರ ವಿಮಾನ ಸೇವೆ..!? ಪ್ರಯಾಣಿಕರ ನಿರೀಕ್ಷೆ ನಿಜವಾಗುವುದೇ?

ಸಂಗ್ರಹ ಚಿತ್ರ · KT Media

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ರಿಯಾದ್‌ಗೆ ನೇರ ವಿಮಾನಯಾನದ ಬೇಡಿಕೆ ಈ ಮಾರ್ಗದ ಪ್ರಯಾಣಿಕರ ಹಲವು ದಿನಗಳ ಕನಸಾಗಿದೆ. ಈ ಮಾರ್ಗದ ನೇರ ವಿಮಾನಕ್ಕೆ ದಿನೇದಿನೇ ಬೇಡಿಕೆ ಹೆಚ್ಚುತ್ತಿದೆ. ಕರಾವಳಿಯ ಪ್ರಯಾಣಿಕರು ಹೈದರಾಬಾದ್, ಬೆಂಗಳೂರು, ದುಬೈ ಅಥವಾ ದೋಹಾದ ಸಂಪರ್ಕ ವಿಮಾನದ ಮೂಲಕವೆ ಸಧ್ಯ ರಿಯಾದ್‌ಗೆ ಪ್ರಯಾಣಿಸಬೇಕಿದೆ. ಇದರಿಂದ ಹೆಚ್ಚಿನ ಹಣ ಹಾಗೂ ಸಮಯದ ವ್ಯಯವಾಗುತ್ತಿದೆ.
ವಲಸೆ ಕಾರ್ಮಿಕರ ಬಹು ದಿನದ ಬೇಡಿಕೆ.
ಸೌದಿ ಅರೇಬಿಯಾದಲ್ಲಿ ಸಾವಿರಾರು ಮಂದಿ ಕರಾವಳಿಯ ವಲಸೆ ಕಾರ್ಮಿಕರು ಹಾಗು ಉದ್ಯಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ರಿಯಾದ್‌ನಲ್ಲಿ ನೆಲೆಸಿರುವ ಕರಾವಳಿಗರು ಮಂಗಳೂರಿಗೆ ನೇರ ವಿಮಾನಯಾನಕ್ಕಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಹಬ್ಬ ಹಾಗೂ ಸಾರ್ವತ್ರಿಕ ರಜೆಯ ಸಂದರ್ಭದಲ್ಲಿ ವಿಮಾನದ ಸೀಟಿನ ಅಲಭ್ಯತೆ ಉಂಟಾಗುವುದೆಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ನೇರ ಸೇವೆ ಯಾಕಿಲ್ಲ..!?
ವಿಮಾನಯಾನ ಸಂಸ್ಥೆಗಳು ನೇರ ಮಾರ್ಗ ಆರಂಭಕ್ಕೂ ಮೊದಲು ಪ್ರಯಾಣಿಕರ ದಟ್ಟಣೆ ಹಾಗೂ ಬರಬಹುದಾದ ಆದಾಯವನ್ನು ಮುಖ್ಯವಾಗಿ ಪರಿಗಣಿದ
ಸುತ್ತವೆ. ಮಂಗಳೂರಿನ ಮಾರುಕಟ್ಟೆ ದೊಡ್ಡಮಟ್ಟದಲ್ಲಿ ಇಲ್ಲದ ಕಾರಣಕ್ಕೆ ಸಂಪರ್ಕ ವಿಮಾನಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಇನ್ನು ಪ್ರಮುಖ ಸಂಸ್ಥೆಗಳು ಹಬ್ ಆಧಾರಿತ ವಿಮಾನ ಜಾಲವನ್ನು ಹೆಚ್ಚು ಬಳಸುತ್ತಿದ್ದು. ಪ್ರಮುಖ ಹಬ್‌ಗಳಾದ ಬೆಂಗಳೂರು, ಹೈದರಾಬಾದ್ ನಂತ ನಗರಗಳಿಗೆ ಪ್ರಯಾಣಿಕರನ್ನು ಒಟ್ಟುಗೂಡಿಸಿ ಅಲ್ಲಿಂದ ನೇರ ವಿಮಾನಸೇವೆ ನೀಡುತ್ತಿವೆ. ಇದು ವಿಮಾನದ ಸೀಟ್‌ಗಳನ್ನು ಖಾಲಿಯಾಗಿರುವುದನ್ನು ತಪ್ಪಿಸುತ್ತದೆ.
ಮಂಗಳೂರಿಗೆ ಸಮೀಪದಲ್ಲೆ ಬೆಂಗಳೂರು, ಕೊಚ್ಚಿ ಹಾಗೂ ಕಣ್ಣೂರು ವಿಮಾನ ನಿಲ್ದಾಣ ಗಳಿದ್ದು, ರಿಯಾದ್‌ಗೆ ನೇರನೇರ ವಿಮಾನಯಾನ ಸೇವೆ ಇದೆ. ಇದರಿಂದಾಗಿ ಹತ್ತಿರದಲ್ಲೇ ಇರುವ ಮಂಗಳೂರಿನಿಂದ ಸೇವೆ ಆರಂಭಿಸಲು ಸಂಸ್ಥೆಗಳಿಗೆ ಆರ್ಥಿಕವಾಗಿ ಸಮಸ್ಯೆಯಾಗಬಹುದು.
ರಿಯಾದ್-ಮಂಗಳೂರು ನಡುವೆ ನೇರ ಸೇವೆ ಯಾವಾಗ.?
ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಲಾಭದಾಯಕವೆನಿಸಿದರೆ ಮಂಗಳೂರು–ರಿಯಾದ್ ನೇರ ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆ ಇದೆ.

The slots here are incredibly exciting and the graphics are amazing. I am winning big at megawinsslot
Finding a trustworthy platform here used to be a real struggle but this one actually delivers. The game library is huge and everything runs smoothly even on slower internet connections. I really like how transparent they are with promotions and how fast the support team responds. It has quickly become my favorite spot to relax. bdbanglabeat
Really impressed with the customer support and how fast the transactions are processed. Everything is professional and transparent. Love bdcpc88!