ಬೆಂಗಳೂರಿಗೆ ಪರ್ಯಾಯ ಟೆಕ್ ‘ಪ್ಲಸ್ ಒನ್’ ಆಗಿ ಮಂಗಳೂರು.ಟಾಪ್ ಟೆಕ್ ಹಬ್ ಆಗುವತ್ತ ದಾಪುಗಾಲು.

ಸಂಗ್ರಹ ಚಿತ್ರ · KT Media

ದ.ಕನ್ನಡ : ಕರ್ನಾಟಕ ಕರಾವಳಿಯ ಪ್ರಮುಖ ನಗರ ಮಂಗಳೂರು ಈಗ ಟೆಕ್ ಕ್ಷೇತ್ರದಲ್ಲಿ ಹೊಸ ತಿರುವಿಗೆ ಸಜ್ಜಾಗಿದೆ. ಬೆಂಗಳೂರಿಗೆ ಪರ್ಯಾಯವಾಗಿ “ಪ್ಲಸ್ ಒನ್” ಪರಿಕಲ್ಪನೆಯಲ್ಲಿ ಸ್ಟಾರ್ಟ್‌ಅಪ್ ಹಾಗೂ ಐಟಿ ಕಂಪನಿಗಳ ನೆಚ್ಚಿನ ಪರ್ಯಾಯ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಉತ್ತಮ ಶಿಕ್ಷಣ, ಮೂಲಭೂತ ಸೌಕರ್ಯಗಳು, ಒಳ್ಳೆಯ ಸಾರಿಗೆ ಹಾಗೂ ಸಂಪರ್ಕ ವ್ಯವಸ್ತೆ ಹೊಂದಿರುವುದು ಈ ಬೆಳವಣಿಗೆಗೆ
ಮುಖ್ಯ ಕಾರಣ.
ಗುಣಮಟ್ಟದ ಶಿಕ್ಷಣ ಹೊಂದಿದ ಅಪಾರ ಪ್ರತಿಭೆಗಳ ಬಲ.
ಮಂಗಳೂರು, ಉಡುಪಿ, ಮಣಿಪಾಲ ಟೆಕ್ ಕ್ಲಸ್ಟರ್‌ನ ಭಾಗವು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ.
- 25ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು.
- ವಾರ್ಷಿಕ 10,000 ಮೀರಿದ ಎಂಜಿನಿಯರಿಂಗ್ ಪದವೀಧರರು.
- ಸುಮಾರು 150 ಪದವಿ ಕಾಲೇಜುಗಳು.
- ವಾರ್ಷಿಕ 40,000+ ಪದವೀಧರರು.
- 250 ಕ್ಕೂ ಹೆಚ್ಚಿನ ಸ್ಟಾರ್ಟಪ್ ಹಾಗೂ ಟೆಕ್ ಕಂಪನಿಗಳು.
- ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನೊಳಗೊಂಡ 8 ಪ್ರಮುಖ ಕಂಪನಿಗಳು.
ಇವು ಮಂಗಳೂರು ಕೇಂದ್ರೀಕೃತ ತಂತ್ರಜ್ಞಾನ ಕ್ಷೇತ್ರಕ್ಕೆ ಬಲಿಷ್ಟವಾದ ಹಾಗೂ ನೈಪುಣ್ಯತೆಯ ಮಾನವ ಸಂಪನ್ಮೂಲಗಳನ್ನು ಒದಗಿಸುತ್ತಿವೆ.
ಕಳೆದ 24 ತಿಂಗಳಿನಲ್ಲೇ ದಾಖಲೆಯ ಬೆಳವಣಿಗೆ.
ಕಳೆದ ಇಪ್ಪತ್ನಾಲ್ಕು ತಿಂಗಳಿನಲ್ಲಿ ಮಂಗಳೂರಿನ ಟೆಕ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದೆ. 40 ಕ್ಕೂ ಹೆಚ್ಚಿನ ಹೊಸ ಕಂಪನಿಗಳು ಆರಂಭವಾಗಿದ್ದು 8000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. 2023 ರಲ್ಲಿ ಸುಮಾರು 15 ಸಾವಿರದಷ್ಟಿದ್ದ ಐಟಿ ಉದ್ದೋಗಿಗಳ ಸಂಖ್ಯೆ ಈಗ 26 ಸಾವಿರದವರೆಗೆ ತಲುಪಿದೆ.
ಈ ಬದಲಾವಣೆಗಳು ಮಂಗಳೂರು ಟೆಕ್ ಉದ್ಯಮದ ಹೊಸ ಹಾದಿ ಹಿಡಿದಿರುವುದು ಸ್ಪಷ್ಟವಾಗುತ್ತಿದೆ.
ಕರಾವಳಿ ಮೂಲದ ಕಂಪನಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.
ಉಡುಪಿ ಮೂಲದ ರೋಬೋಸಾಫ್ಟ್ ಟೆಕ್ನಾಲಜೀಸ್ ಕಂಪನಿಯನ್ನು ಸುಮಾರು 100 ಮಿಲಿಯನ್ ಡಾಲರ್‌ಕಿಂತ ಹೆಚ್ಚಿನ ಮೊತ್ತಕ್ಕೆ ಟೆಕ್ನೋ ಪ್ರೋ ಎಂಬ ಕಂಪನಿಯು ಸ್ವಾಧೀನಪಡಿಸಿಕೊಂಡಿತು.
Niveus Solutions ಕಂಪನಿಯೂ ಭಾರೀ ಮೊತ್ತಕ್ಕೆ NTT Data ಸಂಸ್ಥೆಯು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
Novigo Technologies ಸಂಸ್ಥೆಯನ್ನು R Systems ಕಂಪನಿಯು ಸುಮಾರು $100 ಮಿಲಿಯನ್‌ಗೆ ಖರೀದಿಸಿದೆ.
ಈ ಕಂಪನಿಗಳ ಸ್ವಾಧಿನ ಪ್ರಕ್ರಿಯೆಯು ಮಂಗಳೂರು ಕೇಂದ್ರಿತ ಕರಾವಳಿಯ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರಿಗೆ ಪರಿಚಯಿಸಿದೆ.
ಮೂಲಸೌಕರ್ಯದ ಪ್ರಗತಿ.
1 ಮಿಲಿಯನ್ ಚದರ ಅಡಿಯ ಗ್ರೇಡ್-A ಕಛೇರಿ ಜಾಗ ನಿರ್ಮಾಣ ಹಂತದಲ್ಲಿದ್ದು, 4 ಪ್ರಮುಖ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ಪ್ರೊವೈಡರ್‌ಗಳೂ ಸೇರಿವೆ. 11 ಹೊಸಾ ಕೈಗಾರಿಕಾ ಪ್ರದೇಶಗಳು ತಲೆಯೆತ್ತಲಿದ್ದು, ಸ್ವತಂತ್ರ ಐಟಿ ಪಾರ್ಕ್‌ಗಳು ಹಾಗೂ EPIP ವಲಯಗಳು ಮತ್ತಷ್ಟು ಬಲ ತುಂಬಲಿವೆ.
ಉತ್ತಮ ಸಂಪರ್ಕ ಸೌಲಭ್ಯ.
ಮಂಗಳೂರು ಉತ್ತಮ ಸಂಪರ್ಕ ಸೌಲಭ್ಯ ಹೊಂದಿದ್ದು, ಪ್ರಚಲಿತವಿರುವ ಎಲ್ಲಾ ಪ್ರಮುಖ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು ( NH-66,75,169,169A) ಎರಡು ಪ್ರಮುಖ ರೈಲು ನಿಲ್ದಾಣ, ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು ಹಾಗೂ MRPL ಗಳು ಮಂಗಳೂರನ್ನು ದೇಶ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಪರ್ಕಿಸುತ್ತವೆ.
ಕಡಿಮೆ ವೆಚ್ಚ ಹಾಗೂ ಸುಧಾರಿತ ಜೀವನ ಮಟ್ಟ.
ಇತರೆ Tier-1 ನಗರಗಳಿಗೆ ಹೋಲಿಸಿದರೆ ಇಲ್ಲಿ 25% ಕಡಿಮೆ ಕಾರ್ಯಾಚರಣಾ ವೆಚ್ಚವಿದೆ, ಜೀವನ ವೆಚ್ಚವೂ ಕಡಿಮೆಯಿದ್ದು, ಸ್ವಚ್ಚ ಗಾಳಿ, ಉತ್ತಮ ಕಡಲ ತೀರಗಳು, ಕಡಿಮೆ ಮಾಲಿನ್ಯ, ಉತ್ತಮ ಶಿಕ್ಷಣ, ಆರೋಗ್ಯಕರ ಪರಿಸರ ಇವುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಪನಿಗಳಿಗೆ ಆಕರ್ಷಣೆಯಾಗಿದೆ.
ಐಟಿ ಕ್ಷೇತ್ರದಲ್ಲಿ ಈಗಾಗಲೇ ಬೆಂಗಳೂರಿಗೆ ಪರ್ಯಾಯವಾಗಿ ಗುರುತಿಸಿಕೊಂಡಿರುವ ಮಂಗಳೂರು, ಇಲ್ಲಿನ ಉತ್ತಮ ಜೀವನಶೈಲಿ, ಕಡಿಮೆ ವೆಚ್ಚವು ನಗರವನ್ನು ಹೊಸ ಟೆಕ್ ಹಬ್ ಆಗಿ ರೂಪುಗೊಳ್ಳಲು ತಯಾರಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಖ್ಯವಾದ ಸ್ಥಾನ ಪಡೆಯುವುದಂತೂ ಸ್ಪಷ್ಟವಾಗಿದೆ.

B8clubgame is a great spot to unwind and try your luck. The interfaces is clean and easy to navigate. Give b8clubgame a shot if you are thinking of going gambling.
Really impressed with the security and the ease of depositing funds. It feels safe and professional which is all I care about. Check out cpc88login for a secure bet.
Finally found a platform that actually feels lucky. The bonuses are generous and the customer support is surprisingly quick. Give pklucky81 a try.
The VIP perks here are actually worth it. I feel like a valued player and the special events are always exciting. Great job 2uuu88vip!
The excitement on this site is next level! I had a great run last night and the customer support was super helpful. Give f188game a try for sure.
If you love slots then this is the spot. The variety of games is insane and the hit rate feels way better than other sites. s888slot