ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವೆ ರಸ್ತೆ ಅಪಘಾತಗಳು. ತಡೆಗಟ್ಟಲು ನಾಗರಿಕರ ಸಹಕಾರ ಅಗತ್ಯ

ಸಂಗ್ರಹ ಚಿತ್ರ · KT Media

ಉಡುಪಿ:
ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ–66, ಉಡುಪಿ ,ಕುಂದಾಪುರ, ಬೈಂದೂರಿನ ಪ್ರಮುಖ ರಸ್ತೆಗಳು ಸೇರಿದಂತೆ ಹಳ್ಳಿಗಳನ್ನು ಬೆಸೆಯುವ ಸಂಚಾರ ಮಾರ್ಗಗಳಲ್ಲಿಯೂ ಕೂಡ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಮೂಲ್ಯ ಜೀವಹಾನಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ.
ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಪಘಾತಗಳಿಗೆ ಪ್ರಮುಖವಾಗಿ ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಬಳಸದಿರುವುದು, ಮೊಬೈಲ್ ಫೋನ್ ಬಳಕೆ ಮಾಡಿಕೊಂಡೇ ಚಾಲನೆ ಮಾಡುವ ಪ್ರವೃತ್ತಿ ಹಾಗೂ ಅಜಾಗರೂಕ ಚಾಲನೆಗಳೆ ಕಾರಣವೆಂದು ಗುರುತಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಯಿಂದ ಉಂಟಾದ ಅಸಮತೋಲನ ಹಾಗೂ ರಾತ್ರಿ ವೇಳೆ ಸರಿಯಾದ ಬೆಳಕು ಇಲ್ಲದಿರುವುದೂ ಹಾಗೂ ಮಿತಿಮೀರಿದ ಎಲ್‌ಇಡಿ ಹೆಡ್‌ಲ್ಯಾಂಪ್ಗಳ ಬಳಕೆಯೂ ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ.
ನಾಗರಿಕರು ಕೈಗೊಳ್ಳಬೇಕಾದ ಜಾಗೃತಾ ಕ್ರಮಗಳು.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾನೂನು ಪಾಲನೆ ಮಾತ್ರವಲ್ಲದೆ ಸಾರ್ವಜನಿಕರ ಜವಾಬ್ದಾರಿಯುತ ವರ್ತನೆಯೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕೆಂದು ಸಂಚಾರ ತಜ್ಞರು ಸಲಹೆ ನೀಡಿದ್ದಾರೆ.
01. ಅತಿವೇಗ ತಪ್ಪಿಸಿ:
ನಿಗದಿತ ವೇಗ ಮಿತಿಯೊಳಗೆ ಮಾತ್ರ ವಾಹನ ಚಾಲನೆ ಮಾಡಬೇಕು. ಸಮಯ ಉಳಿಸುವ ಆತುರವೇ ಅನೇಕ ಬಾರಿ ಅಪಾಯಕ್ಕೆ ಕಾರಣವಾಗುತ್ತದೆ.
02. ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಕಡ್ಡಾಯ:
ದ್ವಿಚಕ್ರ ವಾಹನ ಚಾಲಕರು ಹಾಗೂ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಕಾರು ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್‌ಬೆಲ್ಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು.
03. ಮದ್ಯಪಾನ ಮಾಡಿ ವಾಹನ ಚಾಲನೆ ಬೇಡ:
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಘಾತಕ್ಕೆ ಪ್ರಮುಖ ಕಾರಣಗಳಲ್ಲೊಂದು. ಮದ್ಯ ಸೇವಿಸಿದ್ದಲ್ಲಿ ವಾಹನ ಚಾಲನೆ ಮಾಡದೇ ಪರ್ಯಾಯ ವ್ಯವಸ್ಥೆ ಬಳಸಬೇಕು.
04. ಮೊಬೈಲ್ ಬಳಕೆ ನಿಷೇಧ:
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಅಥವಾ ಸಂದೇಶ ನೋಡುವುದು ಅಪಾಯಕಾರಿ ಪ್ರಕ್ರಿಯೆಯಾಗಿದೆ. ಅಗತ್ಯವಿದ್ದರೆ ವಾಹನ ನಿಲ್ಲಿಸಿ ಬಳಕೆ ಮಾಡಬೇಕು.
05. ರಾತ್ರಿ ವೇಳೆ ಎಚ್ಚರಿಕೆ:
ರಾತ್ರಿ ಸಮಯದಲ್ಲಿ ವೇಗ ಕಡಿಮೆ ಮಾಡಿಕೊಂಡು ಚಾಲನೆ ಮಾಡಬೇಕು. ಹೆಡ್‌ಲೈಟ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೆಚ್ಚು ಪ್ರಕರ ಎಲ್‌ಇಡಿ ಗಳನ್ನು ಬಳಸುವುದು ನಿಷೇಧಿಸಬೇಕು.
06. ರಸ್ತೆ ನಿಯಮ ಪಾಲನೆ:
ಸಿಗ್ನಲ್ ಉಲ್ಲಂಘನೆ, ವಿರುದ್ದ ದಿಕ್ಕಿನಲ್ಲಿ ಚಾಲನೆ ಹಾಗೂ ಓವರ್‌ಟೇಕ್ ಮಾಡುವಾಗ ಅಜಾಗರೂಕತೆ ತಪ್ಪಿಸಬೇಕು.
07. ಪಾದಚಾರಿಗಳಿಗೂ ಜವಾಬ್ದಾರಿ :
ರಸ್ತೆ ದಾಟುವಾಗ ಜೀಬ್ರಾ ಕ್ರಾಸಿಂಗ್ ಬಳಸಬೇಕು. ಏಕಾಏಕಿ ರಸ್ತೆ ದಾಟುವುದನ್ನು ತಪ್ಪಿಸಬೇಕು.
ಸಾರ್ವಜನಿಕರಿಗೆ ಮನವಿ
ಸಂಚಾರ ಪೊಲೀಸರು ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ, ವಿಶೇಷವಾಗಿ ಯುವ ಚಾಲಕರಿಗೆ, ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
“ಅಪಘಾತವನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ನಿಯಮ ಪಾಲಿಸಿದರೆ ಮಾತ್ರ ಜೀವ ಉಳಿಯುತ್ತದೆ” ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಕ್ರಮಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಸುರಕ್ಷಿತ ಚಾಲನೆಯೇ ಸುರಕ್ಷಿತ ಬದುಕಿಗೆ ಮೂಲಮಂತ್ರ ಎಂಬ ಸಂದೇಶವನ್ನು ಅಧಿಕಾರಿಗಳು ಮತ್ತೊಮ್ಮೆ ನೆನಪಿಸಿದ್ದಾರೆ.

Super smooth gameplay and the graphics are amazing. It feels very professional and safe. I am really enjoying my time on this platform. jililovelogin
Best slot experience I have had in a long time. The variety of games is impressive and the mobile version works perfectly. Go to ssbet77slot now.
I’ve been playing here for a few weeks and the payouts are actually legit. Really smooth experience so far. Check out krcasinowinoui for a great time!
Finally found a platform that actually treats its players right. The bonuses are generous and the customer service is very helpful. Give perabetcasino a try!
The odds here are actually fair and the layout is clean. I’ve tried a few others but br7700bet42 feels much more professional and trustworthy.
I had some trouble logging in at first but their support team fixed it in minutes. The site is stable and the odds are very competitive. Try macan123login.
The game variety is top notch and I love the interface. Definitely my new go-to spot, check out slotmestre777 if you love slots.
The app version is a game changer. Everything is so much faster on mobile and I can bet on the go without any issues. The bet160apk is a must download.