ಫೆಬ್ರವರಿ 28 ರಿಂದ ದ್ವಿತೀಯ ಪಿ.ಯು.ಸಿ ಪರೀಕ್ಷೆ ಪ್ರಾರಂಭ.ಇಲಾಖೆಯಿಂದ ವೇಳಾಪಟ್ಟಿ ಪ್ರಕಟ

ಸಂಗ್ರಹ ಚಿತ್ರ · KT Media
ಬೆಂಗಳೂರು : 2025-26 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು ಫೆಬ್ರವರಿ 28 ರಿಂದ ಮಾರ್ಚ್ 17 ರ ವರೆಗೆ ಪರೀಕ್ಷೆಗಳು ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ರ ವರೆಗೆ ಪರೀಕ್ಷೆ ನಡೆಯಲಿದೆ.
ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ರಾಜ್ಯಾದ್ಯಂತ ಒಟ್ಟು 1,217 ಪರೀಕ್ಷಾ ಕೇಂದ್ರಗಳಿವೆ.
ಪರೀಕ್ಷಾ ವೇಳಾಪಟ್ಟಿ ಈ ಕೆಳಕಂಡಂತಿದೆ.
ಫೆಬ್ರವರಿ 28 ಕನ್ನಡ, ಅರೇಬಿಕ್.
ಮಾರ್ಚ್ 2 ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3 ಇಂಗ್ಲಿಷ್
ಮಾರ್ಚ್ 5 ಇತಿಹಾಸ
ಮಾರ್ಚ್ 6 ಭೌತಶಾಸ್ತ್ರ (Physics)
ಮಾರ್ಚ್ 7 ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ (Business Studies), ಭೂಗರ್ಭ ಶಾಸ್ತ್ರ
ಮಾರ್ಚ್ 9 ರಸಾಯನಶಾಸ್ತ್ರ (Chemistry), ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10 ಅರ್ಥಶಾಸ್ತ್ರ (Economics)
ಮಾರ್ಚ್ 11 ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12 ಹಿಂದಿ
ಮಾರ್ಚ್ 13 ರಾಜ್ಯಶಾಸ್ತ್ರ (Political Science)
ಮಾರ್ಚ್ 14 ಲೆಕ್ಕಶಾಸ್ತ್ರ (Accountancy), ಗಣಿತ (Mathematics)
ಮಾರ್ಚ್ 16 ಸಮಾಜಶಾಸ್ತ್ರ, ಜೀವಶಾಸ್ತ್ರ (Biology), ಗಣಕ ವಿಜ್ಞಾನ (Computer Science)
ಮಾರ್ಚ್ 17 ಹಿಂದುಸ್ತಾನಿ ಸಂಗೀತ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ರೀಟೇಲ್.
ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗ ಉಚಿತ ಬಸ್.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಹಾಲ್‌ಟಿಕೇಟ್ ತೋರಿಸಿ ಪರೀಕ್ಷಾ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
The app version is way more convenient than the browser. Installation was quick and it runs perfectly on my Android. Get the jili66appdownload and play on the go.
Love the bonuses they offer for new members. It gave me a great head start to explore the different game modes. Give ph567jili a shot.
Been checking out dv88bet lately and it seems pretty good. Decent interface, good odds, and it’s easy to use. Seems legit, and I’m having fun. You shold try it: dv88bet