ಕರಾವಳಿಯಲ್ಲಿ ಈ ಬಾರಿ ದಾಖಲೆಯ ಉಷ್ಣಾಂಶ ಏರಿಕೆ ಸಾಧ್ಯತೆ..!ಹವಾಮಾನ ಇಲಾಖೆಯಿಂದ ಎಚ್ವರಿಕೆ..!

ಸಂಗ್ರಹ ಚಿತ್ರ · KT Media
ದ.ಕ/ಉಡುಪಿ/ಉ.ಕ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಬೇಸಿಗೆಯ ಅಬ್ಬರ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೇಸಿಗೆಯ ಆರಂಭದಲ್ಲೇ ಹೆಚ್ವಿನ ತಾಪಮಾನ ದಾಖಲಾಗುತ್ತಿದ್ದು ಇನ್ನೂ ಹೆಚ್ಚಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ 33°C ರಿಂದ 36°C ವರೆಗೆ ತಾಪಮಾನ ಹೆಚ್ಚಾಗಲಿದ್ದು, ಸಮುದ್ದತೀರದಲ್ಲಿನ ಹೆಚ್ಚಿನ ಆರ್ದ್ರತೆಯಿಂದ ಬಿಸಿಲಿನ ಶಾಖ ಇನ್ನಷ್ಟು ಹೆಚ್ಚು ಅನುಭವಕ್ಕೆ ಬರಲಿದೆ.
ಬಿಸಿಲಿಗೆ ಹೋಗುವಾಗ ಎಚ್ಚರ…!
ಅತಿಹೆಚ್ಚಿನ ತಾಪಮಾನಕ್ಕೆ ನೇರವಾಗಿ ಮೈಯೊಡ್ಡುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿರುವುದರಿಂದ, ನೇರವಾಗಿ ಮಧ್ಯಾಹ್ನನ್ನದ ಹೊತ್ತಿಗೆ ಬಿಸಿಲಿಗೆ ಹೋಗದಂತೆ ಸಲಹೆ ನೀಡಿದೆ. ಸಾಕಷ್ಟು ನೀರು ಸೇವನೆಯ ಜೊತೆಗೆ ಹೆಚ್ಚು ನೀರಿನಂಶ ಹೊಂದಿರುವ ಆಹಾರ ಸೇವನೆ ಸ್ವಲ್ಪ ಮಟ್ಟಿಗಿನ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.
ಬಿಸಿಲಿನ ನಡುವೆಯೂ ಮಳೆಯ ಮುನ್ಸೂಚನೆ.
ಮಾರ್ಚ್ ಎರಡನೇ ಅರ್ಧದಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ಕರಾವಳಿ ಭಾಗಗಳಲ್ಲಿ ಪೂರ್ವಮಾನ್ಸೂನ್ ಮಳೆಯಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇವು ಚಿಕ್ಕ ಅವಧಿಯ ಮಳೆಯಾಗಿದ್ದರೂ ತಾಪಮಾನದಿಂದ ತಾತ್ಕಾಲಿಕ ರಿಲೀಫ್ ನೀಡುವ ಸಾಧ್ಯತೆ ಇದೆ. ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಹಾಗೂ ಬಲವಾದ ಗಾಳಿಯ ಸಂದರ್ಭಗಳಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳುವಾಗ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಪ್ರವಾಸಿಗರ ಸುರಕ್ಷತೆ.
ಬೇಸಿಗೆಯಲ್ಲಿ ಕರಾವಳಿ ಪ್ರವಾಸೋದ್ಯಮ ಕೇಂದ್ರಗಳಾದ ಕುಂದಾಪುರ, ಉಡುಪಿ, ಮಲ್ಪೆ, ಪಣಂಬೂರು ಹಾಗೂ ಕಾರವಾರ ಕಡಲತೀರಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಪ್ರವಾಸಿಗರು ಬಿಸಿಲು ಮತ್ತು ಆರ್ದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

I felt really lucky playing here today. The registration process was quick and the games are top-notch. Five stars for lucky53game.
The login process is super quick and I had no issues setting up my account. Everything feels very professional and secure. Give it a go at jilibet020comloginregister
I stumbled upon this site by accident and now I cannot imagine playing anywhere else. The whole experience is just so clean and straightforward. Games load in seconds and I never deal with those annoying pop ups that clutter other platforms. Customer care is always friendly and actually solves problems on the spot. comines
Best experience I’ve had in a while. The customer support is actually helpful and they respond quickly to queries. Really appreciate the professionalism. Visit ricabetbr