ಟಿ-20 ವಿಶ್ವಕಪ್ : ವಿಜಯ ಸಾಧಿಸಿದ ಭಾರತ.ಸೆಮಿಫೈನಲ್ ಕನಸು ಇನ್ನೂ ಜೀವಂತ.

ಸಂಗ್ರಹ ಚಿತ್ರ · KT Media
ಜಿಂಬಾಬ್ವೆಯನ್ನ 72 ರನ್ಗಳಿಂದ ಸೋಲಿಸುವಮೂಲಕ ಭಾರತ ತಂಡ ಸೆಮಿಫೈನಲ್ ಕನಸನ್ನು ಜೀವಂತ ಉಳಿಸಿಕೊಂಡಿದೆ. ಜಿಂಬಾಬ್ವೆ ತಂಡ ಇನ್ನೂ ಒಂದು ಪಂದ್ಯ ಇರುವಂತೆಯೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಜಿಂಬಾಬ್ವೆ ಹೊರ ಹೋಗುತ್ತಿದ್ದಂತೆ ದಕ್ಷಿಣ ಆಫ್ರಿಕಾ ರನ್‌ರೇಟ್ ಆಧಾರವಾಗಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ಮಾಡು ಇಲ್ಲವೇ ಮಡಿ ಎಂಬಂತಿದ್ದ ಇಂದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೆಕಿತ್ತು, ಅಂತೆಯೇ ಜಿಂಬಾಬ್ವೆ ವಿರುದ್ಧ 72 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ತಂಡ 256 ರನ್ಗಳ ಬೃಹತ್ ಮೊತ್ತ ಕಲೆಹಾಕಿದ್ದು, ನಂತರ ಬೌಲಿಂಗ್ನಲ್ಲೂ ಅತ್ಯುತ್ತಮ ಪ್ರದರ್ಶನ ತೋರಿ ಜಿಂಬಾಬ್ವೆ ತಂಎವನ್ನು 184 ರನ್ಗಳಿಗೆ ಕಟ್ಟಿಹಾಕುವ ಮೂಲಕ ವಿಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ.
Absolutely loving the current promotions. The site runs perfectly on my phone and the community is great. Check out phkingjililogin