Popular Posts

ಜೂನ್ 7ರಂದು ಅಮಲು ಮುಕ್ತ ಭಾರತಕ್ಕಾಗಿ ಜಾಗೃತಿ ನಡಿಗೆ

Spread the love

ಬ್ರಹ್ಮಾವರ: ಟೀಂ ಅಭಿಮತ ಹಾಗೂ ಜನಸೇವಾ ಟ್ರಸ್ಟ್, ಮೂಡುಗಿಳಿಯಾರು ಇವರ ಸಾರಥ್ಯದಲ್ಲಿ “ಅಮಲು ಮುಕ್ತ ಭಾರತಕ್ಕಾಗಿ ಒಂದು ಹೆಜ್ಜೆ” ಎಂಬ ಉದ್ದೇಶದೊಂದಿಗೆ ಗಾಂಜಾ, ಡ್ರಗ್ಸ್ ಸೇರಿದಂತೆ ವಿವಿಧ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಮೂಡಿಸುವ ನಡಿಗೆ ಕಾರ್ಯಕ್ರಮವು ಜೂನ್ 7ರಂದು ಬೆಳಿಗ್ಗೆ 8 ಗಂಟೆಗೆ ಬ್ರಹ್ಮಾವರ ರಥಬೀದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಲಿದೆ.

ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಈ ಜಾಗೃತಿ ನಡಿಗೆಯು ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಸಮಾಜವನ್ನು ಅಮಲು ಮುಕ್ತಗೊಳಿಸುವ ನಿಟ್ಟಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *