ಕುಂದಾಪುರ ಸಮೀಪ ಮಗುಚಿದ ಮೀನುಗಾರಿಕಾ ದೋಣಿ. ಐವರು ಮೀನುಗಾರರು ಅಪಾಯದಿಂದ ಪಾರು.

ಸಂಗ್ರಹ ಚಿತ್ರ · KT Media

ಕುಂದಾಪುರ. ಫೆ26 : ಮೀನುಗಾರಿಕಾ ದೋಣಿಯೊಂದು ಕುಂದಾಪುರ ಸಮೀಪದಲ್ಲಿ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಘಟನೆ ನಡೆದಿದೆ. ಫೆಬ್ರವರಿ 23 ರ ರಾತ್ರಿ ಮಲ್ಪೆ ಬಂದರಿನಿಂದ ಸಮುದ್ರಕ್ಕಿಳಿದಿದ್ದ ದೋಣಿಗೆ ಫೆಬ್ರವರಿ 24 ರಂದು ಕೆಳಭಾಗಕ್ಕೆ ಯಾವುದೋ ವಸ್ತು ಬಡಿದ ಪರಿಣಾಮ ಎಂಜಿನ್ ಕೋಣೆಗೆ ನೀರು ನುಗ್ಗಿದೆ. ದೋಣಿಯ ಸಿಬ್ಬಂದಿ ಕೈಯಿಂದ ನೀರನ್ನು ಹೊರಹಾಕಲು ಪಟ್ಟ ಪ್ರಯತ್ನ ವಿಫಲವಾಗಿ ಎಂಜಿನ್ ಕಾರ್ಯನಿರ್ವಣೆ ನಿಂತಿದ್ದು, ಅಪಾಯವನ್ನರಿತ ಮೀನುಗಾರರು ಸಹಾಯಕ್ಕಾಗಿ ಮೊರೆ ಹೋದರು.
ರಕ್ಷಣಾ ಕಾರ್ಯ ನಡೆದಿದ್ದು ಹೇಗೆ..!
ಮುಳುಗುತ್ತಿದ್ದ ದೋಣಿಯ ಸಮೀಪದಲ್ಲಿಯೇ ಇದ್ದ ‘ ಶ್ರೀ ಕೃಷ್ಣ ’ ದೋಣಿಯ ಮೀನುಗಾರರು ತಕ್ಷಣವೇ ಆಗಮಿಸಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯ ಸಹಾಯದೊಂದಿಗೆ ಐವರನ್ನೂ ರಕ್ಷಣೆ ಮಾಡಿದರು.
ಹಾನಿಯಾಗಿದ್ದ ದೋಣಿಯನ್ನು ಸುಮಾರು 8-9 ನಾಟಿಕಲ್ ಮೈಲು ದೂರದವರೆಗೂ ಹಗ್ಗದ ಸಹಾಯದಿಂದ ಎಳೆಯಲಾಯಿತಾದರೂ ತೀವ್ರ ಪ್ರಕ್ಷುಬ್ಧ ವಾತಾವರಣವಿದ್ದ ಕಾರಣ ಹಗ್ಗ ತುಂಡಾಗಿ ದೋಣಿಸಂಪೂರ್ಣವಾಗಿ ಮುಳುಗಿದೆ.
ಮುಳುಗಿದ “ಶ್ರೀ ದುರ್ಗಾಪರಮೇಶ್ವರಿ” ದೋಣಿಯು ಕೆಮ್ಮಣ್ಣು ಮೂಲದ ನಾಗರಾಜ್ ಪುತ್ರನ್ ಅವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ಮಾಲಿಕರಿಗೆ ಅಂದಾಜು 60-65 ಲಕ್ಷ ರೂ ನಷ್ಟ ಸಂಭವಿಸಿದೆ.
ಈ ಕುರಿತು ಗಂಗೊಳ್ಳಿಯ ಕರಾವಳಿ ಭದ್ರತಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The APK installation was super simple and the app runs perfectly on my Android. No crashes so far. Get betwinerapk and start winning!
If you are looking for a reliable betting site, this is it. The odds are competitive and the site layout is very clean. My go-to is idtmbet88
Great rewards and even better customer support. I had a small issue with my account and they sorted it out in minutes. Big thanks to vntc88.
Best experience I’ve had in a while. The interface is super friendly and the payouts are fair. phplus777asia is becoming my go-to platform for daily entertainment.
The community here is great and the rewards keep me coming back. It is easily one of the most reliable spots online. Visit ph90jiliclub