ಕುಂದಾಪುರದಲ್ಲಿ ಮಿತಿ ಮೀರುತ್ತಿದೆ ಪಾರ್ಕಿಂಗ್ ಸಮಸ್ಯೆ

ಸಂಗ್ರಹ ಚಿತ್ರ · KT Media

ಕುಂದಾಪುರವು ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ. ವ್ಯಾಪಾರ, ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸ ಸ್ಥಾನಗಳ ವಿಸ್ತರಣೆಯೊಂದಿಗೆ ನಗರಕ್ಕೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಈ ಅಭಿವೃದ್ಧಿಗೆ ಸಮಾನವಾಗಿ ಮೂಲಭೂತ ಸೌಲಭ್ಯಗಳ ವಿಸ್ತರಣೆ ಆಗದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಅವುಗಳಲ್ಲಿ ಪ್ರಮುಖವಾದದ್ದು ಪಾರ್ಕಿಂಗ್ ಸಮಸ್ಯೆ.

ನಗರದಲ್ಲಿ ದಿನದಿಂದ ದಿನಕ್ಕೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಕುಟುಂಬಕ್ಕೆ ಒಂದೇ ವಾಹನ ಎಂಬ ಸ್ಥಿತಿ ಈಗ ಬಹುತೇಕ ಬದಲಾಗಿದೆ; ಪ್ರತಿಯೊಬ್ಬ ಸದಸ್ಯನಿಗೂ ಪ್ರತ್ಯೇಕ ವಾಹನ ಇರುವ ಕಾಲ ಬಂದಿದೆ. ಇದರ ಪರಿಣಾಮವಾಗಿ ರಸ್ತೆಗಳ ಮೇಲೆ ವಾಹನಗಳ ಒತ್ತಡ ಹೆಚ್ಚಾಗಿ, ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳು ಸಾಲದೆ ಹೋಗಿವೆ.

ಕುಂದಾಪುರದಲ್ಲಿ ಅಭಿವೃದ್ಧಿಯಲ್ಲಿರುವುದರಿಂದ ಹೊಸ ವಾಣಿಜ್ಯ ಸಂಕೀರ್ಣಗಳು, ಹೋಟೆಲ್ಗಳು ಬೇರೆ ಬೇರೆ ಅಂಗಡಿ ಹಾಗೂ ವಹಿವಾಟುಗಳು ವೇಗವಾಗಿ ನಿರ್ಮಾಣವಾಗುತ್ತಿವೆ. ಆದರೆ ಬಹುತೇಕ ಕಟ್ಟಡಗಳಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ನಿಯಮಗಳಿದ್ದರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಟ್ಟಡಗಳಿಗೆ ಭೇಟಿ ನೀಡುವವರು ರಸ್ತೆ ಬದಿಯನ್ನೇ ಪಾರ್ಕಿಂಗ್ ಸ್ಥಳವಾಗಿ ಬಳಸುವುದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಅಂಗಡಿ ಮಾಲೀಕರಿಂದ ಪಾರ್ಕಿಂಗ್ ಸ್ಥಳದ ದುರುಪಯೋಗ
ನಗರದ ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಗ್ರಾಹಕರಿಗಾಗಿ ಮೀಸಲಾಗಿರುವ ಪಾರ್ಕಿಂಗ್ ಸ್ಥಳಗಳನ್ನು ಅಂಗಡಿ ಮಾಲೀಕರು ಅಥವಾ ಸಿಬ್ಬಂದಿಯೇ ತಮ್ಮ ವಾಹನಗಳನ್ನು ನಿಲ್ಲಿಸಲು ಬಳಸುತ್ತಿರುವುದು ಸಾಮಾನ್ಯವಾಗಿ ಕಾಣುವ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರು ವಾಹನ ನಿಲ್ಲಿಸಲು ಸ್ಥಳ ಸಿಗದೆ ರಸ್ತೆ ಬದಿಯಲ್ಲಿ ಪಾರ್ಕ್ ಮಾಡುವ ಪರಿಸ್ಥಿತಿ ಉಂಟಾಗಿ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ.
ಈ ಸಮಸ್ಯೆಯನ್ನು ನಿಯಂತ್ರಿಸಲು ನಗರಸಭೆ ಮತ್ತು ಸಂಬಂಧಿತ ಇಲಾಖೆಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ನಾಗರಿಕರು ಸಹ ಜವಾಬ್ದಾರಿಯಿಂದ ನಡೆದು ನಿಯಮಗಳನ್ನು ಪಾಲಿಸಬೇಕು.

The app performance is surprisingly stable. I love how easy it is to navigate through the games. Great experience so far with bdck777app